ಮನೆಯಂಗಳದಲ್ಲಿ ನಿಲ್ಲಿಸಿದ್ದ ರಾಯಲ್ ಎನ್ಫೀಲ್ಡ್ ಬೈಕ್ ಕಳವು ಮಾಡಿದ್ದ ಆರೋಪಿ ಹಾಗೂ ಆತನ ನಾಲ್ವರು ಸಹಚರರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದ ಮಾರುತಿಗಲ್ಲಿಯ ನಿವಾಸಿ ತಿಲಕ್ ಮೋಹನ ಬೈಂದೂರು ಎನ್ನುವವರು ತಮ್ಮ ಮನೆ ಎದುರು ರಾತ್ರಿ ಬೈಕ್ ನಿಲ್ಲಿಸಿಟ್ಟಿದ್ದರು. ಬೆಳಗಾಗುವುದರಲ್ಲಿ ಅದು ನಾಪತ್ತೆಯಾಗಿತ್ತು. ಈ ಬಗ್ಗೆ ಅವರು ನಗರ ಠಾಣೆಗೆ ದೂರು ನೀಡಿದ್ದರು.ಅದರ ನಂತರ ನಗರದ ಮಾಲಾದೇವಿ ಮೈದಾನದ ಎದುರಿನ ಮಹಾಲಕ್ಷ್ಮೀ ಗೃಹೋಪಯೋಗಿ ಮಳಿಗೆಯ ಎದುರು ನಿಲ್ಲಿಸಿಟ್ಟಿದ್ದ ರಾಯಲ್