ಗಿರಿನಾಡು ಯಾದಗಿರಿಯಲ್ಲಿ ಗಾಂಜಾ ಘಾಟಿನ ಹಾವಳಿ ಹೆಚ್ಚಾಗಿದೆ. ಪಾನ್-ಬೀಡಾ ಅಂಗಡಿಗಳಲ್ಲಿ ಗಾಂಜಾ ಜಾಕಲೇಟ್ ಎಗ್ಗಿಲ್ಲದೆ ಮಾರಾಟ ಮಾಡಲಾಗುತ್ತಿದೆ. ಇದರಿಂದ ಮಾದಕ ವ್ಯಸನಿಗಳ ಹಾಟ್ ಸ್ಪಾಟ್ ಆಯಿತಾ ಕರುನಾಡು ಅನ್ನೋ ಪ್ರಶ್ನೆ ಮೂಡಿದೆ.ವಿದ್ಯಾರ್ಥಿಗಳು ಹಾಗೂ ಮಧ್ಯ ವಯಸ್ಕರೇ ಗಾಂಜಾ ಆರೋಪಿಗಳ ಟಾರ್ಗೆಟ್ ಆಗಿದ್ದು, ಉತ್ತರ ಪ್ರದೇಶದ ಗಾಂಜಾ ನಶೆಯ ಜಾಕಲೇಟ್ ಯಾದಗಿರಿ ಜಿಲ್ಲೆಯಲ್ಲಿ ಮಾರಾಟವಾಗುತ್ತಿವೆ ಎಂದು ತಿಳಿದುಬಂದಿದೆ. ಶಹಾಪೂರ ನಗರದಲ್ಲಿ ಪಾನ್ಶಾಪ್ ಇಟ್ಟುಕೊಂಡು ಗಾಂಜಾ ಚಾಕಲೇಟ್ ಮಾರಾಟ ಮಾಡುತ್ತಿದ್ದವರು ಆರೋಪಿಗಳು ಅಂದರ್