ರಸ್ತೆ ಬದಿಯಲ್ಲಿ ಎಲ್ಲೆದರಲ್ಲಿ ಕಸ ತಂದು ಸುರಿದು ಮಾಲಿನ್ಯ ಉಂಟು ಮಾಡುವವರಿಗೆ ಬಿಬಿಎಂಪಿ ಬುದ್ದಿ ಕಲಿಸಲು ಮುಂದಾಗಿದೆ. ಇನ್ಮುಂದೆ ಬೇಕಾಬಿಟ್ಟಿ ಕಸ ಎಸೆಯುವವರನ್ನು ತೋರಿಸಿಕೊಟ್ಟರೆ ಪಾಲಿಕೆಯಿಂದ ಅಪ್ರಿಸಿಯೇಷನ್ ಸರ್ಟಿಫಿಕೇಟ್ ಸಿಗಲಿದೆ. ಕಂಡಕಂಡಲ್ಲಿ ಕಸ, ತ್ಯಾಜ್ಯ ಎಸೆಯುವುದರಿಂದ ನಗರದ ರಸ್ತೆ ತುಂಬಾ ಗಬ್ಬು ನಾರುತ್ತಿದೆ. ಈಗಾಗಲೇ ದಂಡ ಪ್ರಯೋಗ, ಮಾರ್ಷಲ್ ಗಳು ಎಚ್ಚರಿಕೆ ನೀಡಿದರೂ ಸಾರ್ವಜನಿಕರು ಅಸಡ್ಡೆ ತೋರುತ್ತಿದ್ದಾರೆ ಹೀಗಾಗಿ ಹೊಸ ಅಸ್ತ್ರ ಪ್ರಯೋಗ ಮಾಡಲು ಪಾಲಿಕೆ ಹೆಜ್ಜೆ ಇಟ್ಟಿದೆ ಎಂದು