ಬೆಂಗಳೂರು (ಆ.17): ರಾಜ್ಕುಮಾರ್ ಅವರ ಕುಟುಂಬದೊಂದಿಗೆ ತಮಗೆ ಅವಿನಾಭಾವ ಸಂಬಂಧವಿದೆ. ರಾಘವೇಂದ್ರ ರಾಜ್ಕುಮಾರ್, ಶಿವರಾಜ್ ಕುಮಾರ್, ಪುನೀತ್ ರಾಜ್ಕುಮಾರ್ ಮೊದಲಿನಿಂದಲೂ ಆತ್ಮೀಯರು. ಪಾರ್ವತಮ್ಮನವರಿಗೆ ನನ್ನ ಮೇಲೆ ಹೆಚ್ಚು ಪ್ರೀತಿ ಇತ್ತು. ಸಣ್ಣ ಸಣ್ಣ ಬೇಡಿಕೆಯನ್ನೂ ಹಂಚಿಕೊಳ್ಳುತ್ತಿದ್ದರು. ಒಂದು ಅಡುಗೆ ಅನಿಲ ಸಿಲಿಂಡರ್ ಸಂಪರ್ಕ ಕೊಡಿಸಪ್ಪಾ ಎಂದು ಹಿಂದೆ ಕೇಳಿದ್ದರು. ನಮ್ಮ ತಂದೆಯವರ ಸಂಸದರ ಕೋಟಾದಿಂದ ಕನೆಕ್ಷನ್ ಕೊಡಿಸಿದ್ದೆ ಎರಡು ದಿವಸದ ನಂತರ ಅಮ್ಮ ಫೋನ್ ಮಾಡಿ ಗ್ಯಾಸ್ ಕನೆಕ್ಷನ್ ಕೊಡಿಸಿದ್ದೀರಾ.