ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆಗಳ ಬಗ್ಗೆ ಉಂಟಾಗಿರುವ ಗೊಂದಲ ನಿವಾರಣೆಗೆ ಗೌರಿ ಲಂಕೇಶ್ ಸಹೋದರ ಇಂದ್ರಜಿತ್ ಲಂಕೇಶ್ ಮತ್ತು ಕವಿತಾ ಲಂಕೆಶ್ ಜಂಟಿ ಸುದ್ದಿಗೋಷ್ಠಿ ನಡೆಸಿದ್ದಾರೆ. ನಮ್ಮ ಅಕ್ಕನಿಗೆ ಸೈದ್ಧಾಂತಿಕ ಶತ್ರುಗಳಿದ್ದರೆ ಹೊರತು ವೈಯಕ್ತಿಕ ಶತ್ರುಗಳಿರಲಿಲ್ಲ. ಸೈದ್ಧಾಂತಿಕ ಶತ್ರುಗಳಿಂದಲೇ ಹತ್ಯೆಯಾಗಿರಬಹುದೆಂದು ಎಂದು ಹೇಳಿದ್ಧಾರೆ. ನಮ್ಮ ಅಕ್ಕನನ್ನ ಕೊಂದವರನ್ನ ಬಂಧಿಸಬೇಕು ನಮಗೆ ನ್ಯಾಯ ಸಿಗಬೇಕು. ಎಸ್ಐಟಿ ತನಿಖೆ ಆರಂಭಿಸಿದ್ದಾರೆ. ತನಿಖೆ ನಡೆಯಲಿ. ಅದಕ್ಕೆ ಸಮಯ ಕೊಡೋಣ. ನ್ಯಾಯ ಸಿಗದಿದ್ದರೆ ಮಾತ್ರ