ಹಿರಿಯ ಸಂಶೋಧಕ ಎಂ.ಎಂ.ಕಲಬುರಗಿ ಹತ್ಯೆಯಾಗಿ ವರ್ಷಗಳೇ ಕಳೆದರೂ ಆರೋಪಿಗಳ ಪತ್ತೆಯಾಗಿಲ್ಲ. ಅದರಂತೆ, ಗೌರಿ ಲಂಕೇಶ್ ಕೇಸ್ ಕೂಡಾ ಹಳ್ಳಹಿಡಿಬಾರ್ದು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೃಹ ಸಚಿವ ರಾಮಲಿಂಗಾರೆಡ್ಡಿ ಪ್ರಕರಣದ ಬಗ್ಗೆ ಹೇಳಿಕೆ ನೀಡಲು ಮಾತ್ರ ಸೀಮಿತರಾಗಿದ್ದಾರೆ. ಕೆಂಪಯ್ಯ ಎಸ್ಐಟಿ ರಚಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ತನಿಖೆ ಮಾಡಿಸುತ್ತಿದ್ದಾರೆ. ರಾಮಲಿಂಗಾರೆಡ್ಡಿ ಆತ್ಮ ಮುಟ್ಟಿಕೊಂಡು ಎಸ್ಐಟಿ ಕೆಂಪಯ್ಯ ರಚಿಸಿಲ್ಲ ಎಂದು ಹೇಳಲಿ ಬಹಿರಂಗ ಸವಾಲ್ ಹಾಕಿದರು.