ಬೆಂಗಳೂರು: ಹಿರಿಯ ಪತ್ರಕರ್ತೆ, ವಿಚಾರವಾದಿ ಗೌರಿ ಲಂಕೇಶ್ ಗೆ ನಕ್ಸಲರಿಂದ ಬೆದರಿಕೆ ಈಮೇಲ್ ಸಂದೇಶಗಳು ಬರುತ್ತಿತ್ತು ಎಂದು ಸಹೋದರ ಇಂದ್ರಜಿತ್ ಲಂಕೇಶ್ ಖಾಸಗಿ ವಾಹಿನಿಯೊಂದಕ್ಕೆ ಹೇಳಿದ್ದಾರೆ. ನಕ್ಸಲರನ್ನು ಮನಃಪರಿವರ್ತಿಸಿ ಮುಖ್ಯ ವಾಹಿನಿಗೆ ತರಲು ಸಾಕಷ್ಟು ಶ್ರಮಿಸಿದ್ದ ಗೌರಿ ಲಂಕೇಶ್ ಗೆ ಇದೇ ಕಾರಣಕ್ಕೆ ಕೆಲವು ನಕ್ಸಲರಿಂದಲೇ ಬೆದರಿಕೆ ಇತ್ತು ಎಂದು ಇಂದ್ರಜಿತ್ ಹೇಳಿಕೊಂಡಿದ್ದಾರೆ.ಇಷ್ಟೆಲ್ಲಾ ಇದ್ದರೂ ಗೌರಿ, ನನಗಾಗಲೀ, ನನ್ನ ಸಹೋದರಿ, ತಾಯಿ ಬಳಿಯಾಗಲೀ ತನಗೆ ಬೆದರಿಕೆ ಇತ್ತು ಎಂಬುದನ್ನು