ಕರುನಾಡಿನ ದಿಟ್ಟ ಪತ್ರಕರ್ತೆ ಗೌರಿ ಲಂಕೇಶ್ ಮಣ್ಣಲ್ಲಿ ಮಣ್ಣಾಗಿ ಹೋಗಿದ್ದಾರೆ. ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾದ ಗೌರಿ ಲಂಕೇಶ್ ಅವರ ಕೊನೆಯ ಕ್ಷಣವನ್ನ ಸಿಸಿಟಿವಿ ಬಿಚ್ಚಿಟ್ಟಿದೆ. ಗೌರಿ ಲಂಕೇಶ್ ಮೇಲೆ 3 ಸುತ್ತು ಗುಂಡು ಹಾರಿಸಿದ ಬಳಿಕವೂ ಎದ್ದು ಮನೆಯೊಳಗೆ ತೆರಳಲು ಗೌರಿ ಲಂಕೇಶ್ ಯತ್ನಿಸಿದ್ದಾರೆ. ಆದರೆ, ದೇಹ ಸೀಳಿದ್ದ ಗುಂಡುಗಳಿಂದಾಗಿ ಗೌರಿ ಲಂಕೇಶ್ ಮುಂದೆ ತೆರಳಲು ಆಗದೇ ಕುಸಿದು ಬಿದ್ದಿದ್ದಾರೆ. ಗುಂಡಿನ ಸದ್ದು ಕೇಳಿ ಸ್ಥಳಕ್ಕಾಗಮಿಸಿದ ನೆರೆಹೊರೆಯವರು ರಕ್ತದ