ಜೆಡಿಎಸ್ ನವರು ಬಿಜೆಪಿಗೆ ಮತ ಹಾಕಿದ್ದಾರೆ ಎಂದ ಜಿಟಿಡಿ ಹೇಳಿಕೆ ಸತ್ಯ - ಸಿದ್ಧರಾಮಯ್ಯ

ಮೈಸೂರು, ಸೋಮವಾರ, 6 ಮೇ 2019 (07:38 IST)

ಮೈಸೂರು : ಉದ್ಬೂರಿನಲ್ಲಿ ಜೆಡಿಎಸ್ ನವರು ಬಿಜೆಪಿಗೆ ಮತ ಹಾಕಿದ್ದಾರೆ  ಎಂದು  ಜಿಟಿ ದೇವೇಗೌಡರು ಸತ್ಯ ಹೇಳಿದ್ದಾರೆ ಎಂದು ಮಾಜಿ ಸಿಎಂ ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಗೆ ಮಾತನಾಡಿದ ಅವರು, ಸಚಿವ ಜಿ.ಟಿ.ದೇವೇಗೌಡ ಸತ್ಯ ಹೇಳಿದ್ದಾರೆ. ಉದ್ಬೂರಿನಲ್ಲಿ ಜೆಡಿಎಸ್‌ನವರು ಬಿಜೆಪಿಗೆ ಮತ ಹಾಕಿರುವುದು ಸತ್ಯ. ಉದ್ಬೂರಿನಲ್ಲಿ ಜೆಡಿಎಸ್ ಮತದಾರರು ಮಾತ್ರ ಇಲ್ಲ. ಕಾಂಗ್ರೆಸ್ ಮತದಾರರು ಇದ್ದಾರೆ. ಕಾಂಗ್ರೆಸ್ ಮತದಾರರು ಕಾಂಗ್ರೆಸ್‌ಗೆ ಮಾಡಿದ್ದಾರೆ. ಜೆಡಿಎಸ್‌ನವರು ಬಿಜೆಪಿಗೆ ಮಾಡಿದ್ದಾರೆ ಎಂದು ಹೇಳಿದ್ದಾರೆ.


ಆದರೆ ಉದ್ಬೂರು ಗ್ರಾಮದಲ್ಲಿ ನಡೆದಿರುವುದು ಇಡೀ ಕ್ಷೇತ್ರಕ್ಕೆ ಅನ್ವಯಿಸದು. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ 18 ಲಕ್ಷ ಮತದಾರರಿದ್ದು, ಎಲ್ಲರೂ ಬುದ್ದಿವಂತರಿದ್ದಾರೆ. ಶೇ.100ಕ್ಕೆ ನೂರರಷ್ಟು ನಾವು ಮೈಸೂರು -ಕೊಡಗು ಕ್ಷೇತ್ರದಲ್ಲಿ ಗೆಲ್ಲುತ್ತೇವೆ. ಈಗಲೇ ಎಷ್ಟು ಸಾವಿರ ಮತಗಳಿಂದ ಗೆಲ್ಲುತ್ತೇವೆ ಅಂತ ಶಾಸ ಹೇಳೋಕಾಗುತ್ತಾ, ಮೈಸೂರು- ಕೊಡಗಿನಲ್ಲೂ ನಮಗೆ ಚೆನ್ನಾಗಿ ವೋಟ್ ಬಂದಿದೆ. ಫಲಿತಾಂಶ ಬಂದಾಗ ನಿಮಗೆ ಗೊತ್ತಾಗುತ್ತದೆ ಎಂದು ಅವರು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಐದನೇ ಹಂತದ ಚುನಾವಣೆ; ಇಂದು 7 ರಾಜ್ಯಗಳಲ್ಲಿ ಮತದಾನ

ನವದೆಹಲಿ : ಇಂದು ಐದನೇ ಹಂತದ ಚುನಾವಣೆಗೆ ದೇಶದ ಒಟ್ಟು 7 ರಾಜ್ಯಗಳ 51 ಲೋಕಸಭಾ ಸ್ಥಾನಗಳಿಗೆ ಮತದಾನ ...

news

ಕೆರೆಗಿಳಿದ ಭಾವ-ಭಾಮೈದ ಏನಾದ್ರು?

ಕೆರೆಯಲ್ಲಿ ಭಾವ-ಭಾಮೈದ ಇಳಿದಿದ್ದರು. ಆದರೆ ಅವರ ಮನೆಯಲ್ಲಿ ಈಗ ದುಃಖ ಮಡುಗಟ್ಟಿದೆ.

news

ಜಾಧವ್ ವಿರುದ್ಧ ಖರ್ಗೆ ಸಿಡಿಸಿದ್ರು ಹೊಸ ಬಾಂಬ್!

ಮಂತ್ರಿ ಸ್ಥಾನ ಬೇಡ. ನಿಗಮ ಮಂಡಳಿ ಸ್ಥಾನ ಸಿಕ್ಕರೆ ಸಾಕು. ಹೀಗಂತ ಉಮೇಶ್ ಜಾಧವ್ ಹೇಳಿದ್ದರು ಅಂತ ಖರ್ಗೆ ...

news

ತಡರಾತ್ರಿ ವಾಹನದಲ್ಲಿ ಅದನ್ನು ಮಾಡಿ ಸಿಕ್ಕಿಬಿದ್ದ!

ತಡರಾತ್ರಿ ಐವರು ಸೇರಿ ವಾಹನವೊಂದರಲ್ಲಿ ಅಸಹ್ಯ ಕೆಲಸ ಮಾಡಿದ್ದಾರೆ.