ಹಿರೇನಾಗವೇಲಿ ಬಳಿ ಜಿಲೆಟಿನ್ ಸ್ಫೋಟ ಕೇಸ್; ದುರಂತಕ್ಕೆ ಸಚಿವ ಸುಧಾಕರ್ ನೇರ ಹೊಣೆ ಎಂದ ಕಾಂಗ್ರೆಸ್

ಬೆಂಗಳೂರು| pavithra| Last Modified ಮಂಗಳವಾರ, 23 ಫೆಬ್ರವರಿ 2021 (11:17 IST)
ಬೆಂಗಳೂರು : ಚಿಕ್ಕಬಳ್ಳಾಪುರದ ಹಿರೇನಾಗವೇಲಿ ಬಳಿ ಜಿಲೆಟಿನ್ ಸ್ಫೋಟವಾದ ಹಿನ್ನಲೆಯಲ್ಲಿ 6 ಮಂದಿ ಬಲಿಯಾಗಿದ್ದಾರೆ. ಈ ದುರಂತಕ್ಕೆ ಸಚಿವ ಸುಧಾಕರ್ ನೇರ ಹೊಣೆ ಎಂದು ಟ್ವೀಟ್ ಮಾಡಿ ರಾಜ್ಯ ಕಾಂಗ್ರೆಸ್ ಘಟಕ ಆರೋಪ ಮಾಡಿದೆ.

ಶಿವಮೊಗ್ಗದ ಸ್ಪೋಟದ ನಂತರವೂ ಎಚ್ಚೆತ್ತುಕೊಳ್ಳದ ಸರ್ಕಾರ. ಅಕ್ರಮ ಕಲ್ಲು ಕ್ವಾರಿಗಳಿಗೆ ಸ್ಫೋಟಗಳಿಗೆ ಕಡಿವಾಣ ಹಾಕದೆ ಅಕ್ರಮಕ್ಕೆ ಬೆಂಬಲವಾಗಿದ್ದರ ಪರಿಣಾಮ ಜಿಲೆಟಿನ್ ಸ್ಫೋಟಗೊಂಡಿದೆ. ಶಿವಮೊಗ್ಗದಂತೆ ಇಲ್ಲೂ ಅಕ್ರಮದ ಹಿಂದೆ ಬಿಜೆಪಿಗರೇ ಇದ್ದಾರೆ ಎಂದು ಟ್ವೀಟ್ ಮಾಡಿ ರಾಜ್ಯ ಕಾಂಗ್ರೆಸ್ ಘಟಕ ಆರೋಪ ಮಾಡಿದೆ.ಇದರಲ್ಲಿ ಇನ್ನಷ್ಟು ಓದಿ :