Widgets Magazine

ಜೈಲಿನಿಂದ ಹೊರಬಂದು ಮತ್ತೆ ಆ ಕೆಲಸ ಮಾಡೋದಾ?

ಚಿಕ್ಕಬಳ್ಳಾಪುರ| Jagadeesh| Last Modified ಶುಕ್ರವಾರ, 18 ಸೆಪ್ಟಂಬರ್ 2020 (21:15 IST)
ಹಲವು ಕೇಸ್ ಗಳಲ್ಲಿ ಆರೋಪಿಯಾಗಿರುವ ವ್ಯಕ್ತಿಯೊಬ್ಬ ಜೈಲಿನಿಂದ ಹೊರ ಬಂದ ಬಳಿಕ ಮತ್ತೆ ಅದೇ ಕೆಲಸ ಶುರುವಿಟ್ಟುಕೊಂಡಿದ್ದಾನೆ.

ಆರೋಪಿ ಫಿರ್ದೋಸ್ ಖಾನ್ ಎಂಬಾತ ಮನೆಯೊಂದರಲ್ಲಿ ಸಂಗ್ರಹ ಮಾಡಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ 15 ಗಾಂಜಾ ಪಾಕೆಟ್ ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಗಾಂಜಾ ಅಕ್ರಮ ಸಾಗಾಟ, ಮಾರಾಟದ ಕೇಸ್ ಗಳು ಆರೋಪಿ ಮೇಲಿವೆ. ಆದರೂ ಜೈಲಿಗೆ ಹೋಗಿ ಬಂದ ಬಳಿಕವೂ ತನ್ನಹಳೇ ಚಾಳಿಯನ್ನೇ ಮುಂದುವರಿಸಿದ್ದಾನೆ.

ಪೊಲೀಸರು ಚಿಕ್ಕಬಳ್ಳಾಪುರದ ನೆಹರೂಜಿ ಕಾಲೋನಿಯ ಮನೆಯೊಂದರ ಮೇಲೆ ದಾಳಿ ನಡೆಸಿ ಗಾಂಜಾ ವಶಕ್ಕೆ ಪಡೆದುಕೊಂಡಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :