ಬಿಸಿಲುನಾಡು ಖ್ಯಾತಿಯ ಜಿಲ್ಲೆಯ ರೈತರಿಂದ ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಕ್ವೀಂಟಲ್ಗೆ 6100 ರೂ.ದರದಲ್ಲಿ ತೊಗರಿ ಖರೀದಿಸಲು ಒಟ್ಟು 120 ತೊಗರಿ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ. ತೊಗರಿ ಖರೀದಿ ಕೇಂದ್ರ ಆರಂಭಿಸಲಾಗಿದೆ ಎಂದು ಕಲಬುರಗಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಟಾಸ್ಕರ್ಫೋಸ್ ಸಮಿತಿ ಅಧ್ಯಕ್ಷ ಆರ್.ವೆಂಕಟೇಶಕುಮಾರ ತಿಳಿಸಿದ್ದಾರೆ.ತೊಗರಿ ಬೆಳೆದ ರೈತರು ಹತ್ತಿರವಿರುವ ಯಾವುದೇ ತೊಗರಿ ಖರೀದಿ ಕೇಂದ್ರಕ್ಕೆ ಅವಶ್ಯಕ ದಾಖಲಾತಿಗಳೊಂದಿಗೆ ಆನಲೈನನಲ್ಲಿ ಡಿಸೆಂಬರ 24 ರಿಂದ 2019ರ ಜನವರಿ 07 ರವರೆಗೆ ನೊಂದಾಯಿಸಬಹುದಾಗಿದೆ.