ಲಾಕ್ ಡೌನ್ ವಿಸ್ತರಣೆ ನಡುವೆ ಕೆಲವು ಷರತ್ತುಗಳೊಂದಿಗೆ ಮೀನುಗಾರಿಕೆಗೆ ಪರ್ಮಿಷನ್ ಕೊಟ್ಟಿರೋದ್ರಿಂದ ಇನ್ಮುಂದೆ ತಿನ್ನೋಕೆ ಮೀನು ಸಿಗುತ್ತವೆ. ಉತ್ತರಕನ್ನಡ ಜಿಲ್ಲೆಯ ಕರಾವಳಿ ತಾಲೂಕುಗಳಲ್ಲಿ ಸಾಂಪ್ರದಾಯಿಕ ಮೀನುಗಾರಿಕೆಗೆ ಕೆಲ ಷರತ್ತುಗಳನ್ನು ವಿಧಿಸಿ ಮೀನುಗಾರಿಕೆ ಇಲಾಖೆ ಅವಕಾಶ ನೀಡಿದೆ.ನಾಡದೋಣಿ, ಹತ್ತು ಎಚ್ಪಿ ಮೋಟಾರ್ ಅಳವಡಿಸಿದ ದೋಣಿಗಳು ಹಾಗೂ ಸಾಂಪ್ರದಾಯಿಕ ಮೀನುಗಾರಿಕೆಗೆ ಮಾತ್ರ ಅವಕಾಶ ನೀಡಲಾಗಿದೆ. ಮೀನುಗಾರರು ಪ್ರತಿದಿನ ಮುಂಜಾನೆ ಅಥವಾ ಹಿಂದಿನ ರಾತ್ರಿ ಮೀನುಗಾರಿಕೆಗೆ ತೆರಳಿ ಬೆಳಗ್ಗೆ 7 ರಿಂದ 11 ಗಂಟೆಯವರೆಗೆ