ಗಡಿ ಜಿಲ್ಲೆ ಬೆಳಗಾವಿ ಪ್ರವಾಸದಲ್ಲಿರುವ ಸಿಎಂ ವಿರುದ್ಧ ರೈತರು ಧಿಕ್ಕಾರ ಕೂಗಿದ್ದಾರೆ. ಸರ್ಕಾರ- ಸಿಎಂ ವಿರುದ್ಧ ಘೋಷಣೆ ಕೂಗಿರುವ ಬೆಳೆಗಾರರು, ಬೊಬ್ಬೆ ಹೊಡೆದುಕೊಂಡು ಸಂಸದರ ವಿರುದ್ಧ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. ಪ್ರವಾಹದಿಂದ ಆದ ಬೆಳೆಹಾನಿ ಪರಿಹಾರ ಕೊಡುವಂತೆ ಆಗ್ರಹಿಸಿ ಬೆಳಿಗ್ಗೆ ಬೆಳಗಾವಿಯ ಪ್ರವಾಸಿ ಮಂದಿರದ ಬಳಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಘೇರಾವ್ ಹಾಕಲು ರೈತರು ಬಂದಿದ್ದರು. ಆದರೆ ಘೇರಾವ್ ಹಾಕಲು ಬಂದಿದ್ದ ರೈತರನ್ನು ತಡೆದು ಪೊಲೀಸರು ಬಂಧಿಸಿದರು.ಪ್ರವಾಹಕ್ಕೆ ನಾಶವಾದ