ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣ ಟ್ವಿಟ್ಟರ್ ಅನ್ನು ಖರೀದಿಸಿದ ವಿಶ್ವದ ನಂಬರ್ ಒನ್ ಶ್ರೀಮಂತ ಎಲೋನ್ ಮಸ್ಕ್ ಟ್ವಿಟ್ಟರ್ನಲ್ಲಿ ಸಾಕಷ್ಟು ಸಕ್ರಿಯರಾಗಿದ್ದು, ಬಳಕೆದಾರರು ಒಂದಿಲ್ಲೊಂದು ಟ್ವೀಟ್ ಮಾಡುತ್ತಲೇ ಇರುತ್ತಾರೆ. ಎಲೋನ್ ಮಸ್ಕ್ಗೆ ತಮಾಷೆಗೆಂದು ಖರೀದಿಯ ಆಫರ್ ನೀಡುತ್ತಿರುತ್ತಾರೆ. ಭಾರತದ ಯುವ ಕ್ರಿಕೆಟಿಗ, ಐಪಿಎಲ್ 2022ರ ಸೀಸನ್ನಲ್ಲಿ ಗುಜರಾತ್ ಟೈಟನ್ಸ್ ಪರ ಬ್ಯಾಟ್ ಬೀಸುತ್ತಿರುವ ಶುಭಮನ್ ಗಿಲ್ ಸಹ ಎಲೋನ್ ಮಸ್ಕ್ಗೆ ಟ್ವೀಟ್ ಮಾಡಿದ್ದಾರೆ. ರಾತ್ರಿ 11.1 ನಿಮಿಷಕ್ಕೆ ಟ್ವೀಟ್ ಮಾಡಿದ್ದು, ವಿಶ್ವದ