ಬೆಳಗಾವಿ : ಪ್ರೇಯಸಿಯ ಕತ್ತು ಹಿಸುಕಿ ಕೊಂದು ತಾನು ನೇಣುಬಿಗಿದುಕೊಂಡು ಪ್ರಿಯಕರ ಆತ್ಮಹತ್ಯೆ ಮಾಡಿಕೊಂಡರುವ ಘಟನೆ ಬಸವ ಕಾಲೋನಿಯಲ್ಲಿ ನಡೆದಿದೆ. ರಾಮಚಂದ್ರ ತೆಣಗಿ(29) ಮೃತ ಯುವಕನಾಗಿದ್ದಾನೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮದ್ಲೂರು ಗ್ರಾಮದ ಪ್ರೇಯಸಿ ರೇಣುಕಾ ಅವರನ್ನು ರಾಮಚಂದ್ರ ತೆಣಗಿ ಕೊಲೆ ಮಾಡಿದ್ದಾನೆ. ಬಾಡಿಗೆ ಮನೆಯೊಂದರಲ್ಲಿ ರೇಣುಕಾ ಏಕಾಂಗಿಯಾಗಿ ವಾಸವಾಗಿದ್ದರು. ತಡರಾತ್ರಿ ಮನೆಗೆ ಬಂದಿದ್ದ ರಾಮಚಂದ್ರ, ರೇಣುಕಾ ವರನ್ನು ಸ್ಕಿಪ್ಪಿಂಗ್ ಮಾಡುವ ವಯರ್ನಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.ಪ್ರೇಯಸಿ