ಬೆಂಗಳೂರು: ಮಣಿಪುರದಲ್ಲಿ ಹೆಣ್ಣುಮಕ್ಕಳ ಮೇಲೆ ರೇಪ್ ಆಗಿದೆ. ಇಲ್ಲಿ ಕ್ಯಾಮೆರಾ ಅಂತೀರಾ ಎಂದು ಉಡುಪಿ ವೀಡಿಯೋ ಪ್ರಕರಣ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಬಿಜೆಪಿ ವಿರುದ್ಧ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಕಿಡಿಕಾರಿದರು. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಗರಿಗೆ ವೋಟ್ ಬ್ಯಾಂಕ್. ಮಧ್ಯದಲ್ಲಿ ಶಿಕಾರಿ ನಾವು. ಇಬ್ಬರೂ ನಮ್ಮನ್ನು ತೋರಿಸಿ ವೋಟು ಮಾಡಿದ್ರು. ಭಯೋತ್ಪಾದನೆ ಶುರುವಾಗುತ್ತಿದೆ ಎನ್ನುವುದೇ ಇವರಿಗೆ ಲೋಕಸಭಾ ವಿಷಯವಾಗಿದೆ. ಮಣಿಪುರದಲ್ಲಿ ಸುಡುತ್ತಿದೆ. ಅದರ ಬಗ್ಗೆ ಮಾತನಾಡುತ್ತಿಲ್ಲ.