ರಾಜ್ಯ ರಾಜಕೀಯದಲ್ಲಿ ಕುಕ್ಕರ್ ಬಾಂಬ್ ಜಟಾಪಟಿ ತಾರಕಕ್ಕೇರಿದೆ. ಮೊನ್ನೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಂಗಳೂರಲ್ಲಿ ನಡೆದ ಬ್ಲಾಸ್ಟ್ ಕೇಸ್ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು. ಈ ಬಗ್ಗೆ ಕೇಸರಿ ಕಲಿಗಳು ಡಿಕೆಶಿ ವಿರುದ್ಧ ವಾಕ್ಸಮರ ನಡೆಸಿದ್ದಾರೆ. ಇದೀಗ ಕಂದಾಯ ಸಚಿವ ಆರ್.ಅಶೋಕ್ ಕೂಡ ಲೇವಡಿ ಮಾಡಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ಅವರು, ಡಿಕೆಶಿ ಅವರಿಗೆ ಅಮಾಯಕ ನೋಬೆಲ್ ಪ್ರಶಸ್ತಿ ಪ್ರದಾನ ಮಾಡಬೇಕು. ಗ್ರಾಮ ವಾಸ್ತವ್ಯ ಕಾರ್ಯಕ್ರಮದ ದಲಿತರ ಮನೆಯಲ್ಲಿ ಉಪಾಹಾರ ಸೇವಿಸಿ ಮಾತನಾಡಿದ