ಬೆಂಗಳೂರಿನ ಚಾಮರಾಜಪೇಟೆ ಈದ್ಗಾ ಮೈದಾನ ಫೈಟ್ ಮುಗಿಯುತ್ತಲೇ ಇಲ್ಲ. ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ವಿವಾದ ಭುಗಿಲೇಳುತ್ತಾ ಅನ್ನೋ ಪ್ರಶ್ನೆ ಉದ್ಭವಿಸಿದೆ. ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಗೆ ಹಲವು ಸಂಘಟನೆಗಳು ಪಟ್ಟು ಹಿಡಿದಿರುವುದು ಅಧಿಕಾರಿಗಳಿಗೆ ತಲೆನೋವಾಗಿದೆ. ಹೀಗಾಗಿ ಧ್ವಜಾರೋಹಣ,ಗಣೇಶೋತ್ಸವ ಮುಗಿದರೂ ಮೈದಾನದ ಗಲಾಟೆ ಇನ್ನೂ ತಣ್ಣಗಾಗಿಲ್ಲ. ಗಣೇಶೋತ್ಸವಕ್ಕೆ ಅನುಮತಿ ಸಿಗದೆ ನಿರಾಸೆ ಗೊಂಡಿರೋ ಹಿಂದೂಪರ ಸಂಘಟನೆಗಳು ಇದೀಗ ಕನ್ನಡ ರಾಜ್ಯೋತ್ಸವ ಆಚರಣೆಗೆ ಬಿಗಿಪಟ್ಟು ಹಿಡಿದಿದ್ದಾರೆ. ಮೈದಾನದಲ್ಲಿ ನವೆಂಬರ್ 1 ರಂದು ಕನ್ನಡ