ತವರು ಕ್ಷೇತ್ರವನ್ನು ಮೊಮ್ಮಗನಿಗೆ ಧಾರೆ ಎರೆದಿರುವ ಹೆಚ್.ಡಿ.ದೇವೇಗೌಡರು ಬೇರೆ ಕ್ಷೇತ್ರಗಳತ್ತ ಚಿತ್ತ ಹರಿಸಿರುವ ಬೆನ್ನಲ್ಲೇ ಗೋ ಬ್ಯಾಕ್ ಅಂತ ಪೋಸ್ಟ್ ಹರಿಬಿಡಲಾಗುತ್ತಿದೆ.ಮಾಜಿ ಪ್ರಧಾನಿ ದೇವೇಗೌಡರೇ ತುಮಕೂರಿಗೆ ಬರಬೇಡಿ. ಹೀಗಂತ ಮಾಜಿ ಪ್ರಧಾನಿಗೆ ವಿರುದ್ದ ಗೋ ಬ್ಯಾಕ್ ಪೋಸ್ಟ್ ಹಾಕಲಾಗುತ್ತಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ಹೆಚ್.ಡಿ.ಡಿ. ಸ್ಪರ್ಧೆಗೆ ವಿರೋಧ ವ್ಯಕ್ತವಾಗುತ್ತಿದೆ.ಮೈತ್ರಿ ಧರ್ಮ ಪಾಲಿಸಿ ಕಾಂಗ್ರೆಸ್ ನ ಮುದ್ದಹನುಮೇಗೌಡಗೆ ಟಿಕೇಟ್ ನೀಡಿ ಅಂತ ಪೋಸ್ಟ್ ಬರೆದು ಒತ್ತಾಯಿಸಲಾಗುತ್ತಿದೆ. ಹೆಚ್.ಡಿ.ದೇವೇಗೌಡರೇ ತುಮಕೂರಿಗೆ ವಲಸೆ ಬರಬೇಡಿ.