ಬೇರೆ ರಾಜ್ಯದಿಂದ ಇಲ್ಲಿಗೆ ಬಂದು ಸ್ವಯಂ ಉದ್ಯೋಗವಾಗಿ ಕಲ್ಲಿನಲ್ಲಿ ಗೃಹೋಪಯೋಗಿ ಸಮಾನುಗಳನ್ನು ಕೆತ್ತನೆ ಮಾಡಿ ಮಾರಾಟದಿಂದ ಬರುವ ಅಲ್ಪ ಹಣದಲ್ಲಿ ಬದುಕು ಸಾಗಿಸುವ ಅಲೆಮಾರಿ ಜನಾಂಗದವರ ಗುಡಿಸಲಿಗೆ ತಹಸೀಲ್ದಾರ್ ಭೇಟಿ ನೀಡಿದ್ದಾರೆ. ಕಲಬುರಗಿಯ ಶಹಾಬಾದ ತಹಶೀಲ್ದಾರ ಸುರೇಶ ವರ್ಮಾ ಅವರು ಭೇಟಿ ನೀಡಿ ಸ್ವತಃ ಕಿರಾಣಿ ದಿನಸಿಗಳನ್ನು ನೀಡಿದರು. ಲಾಕ್ ಡೌನ್ ಪರಿಣಾಮ ಅಲೆಮಾರಿ, ಭಿಕ್ಷುಕರಿಗೆ, ನಿರ್ಗತಿಕರಿಗೆ ಆಹಾರ ಸಮಸ್ಯೆಯನ್ನು ಮನಗಂಡು ಜಿಲ್ಲಾಡಳಿತ ಜಿಲ್ಲೆಯಾದ್ಯಂತ ಇಂತವರಿಗೆ ಅಹಾರ ಸರಬರಾಜು ಮಾಡಲು