ಜೂನ್ ಮತ್ತು ಜುಲೈ ತಿಂಗಳಲ್ಲಿ ಸರ್ಕಾರವೇ ಕರಾವಳಿ ಪ್ರದೇಶದಲ್ಲಿ ಕಡಲಿಗೆ ಇಳಿದು ಮೀನುಗಾರಿಕೆ ಮಾಡದಂತೆ ನಿಷೇದವನ್ನ ಹೇರಲಾಗುತ್ತದೆ. ಮೀನುಗಳು ಮಳೆಗಾಲದ ಅವಧಿಯಲ್ಲಿ ಸಂತಾನೋತ್ಫತ್ತಿಯಲ್ಲಿ ತೊಡಗುತ್ತದೆ ಎಂದು ಬಂದ್ ಮಾಡಲಾಗುತ್ತದೆ. ಇನ್ನು ಈ ಸಂದರ್ಭದಲ್ಲಿ ತಾಜಾ ಮೀನುಗಳು ಮಾರಾಟಕ್ಕೆ ಸಿಗದ ಹಿನ್ನಲೆಯಲ್ಲಿ ಐಸ್ ನಲ್ಲಿ ಹಾಕಿದ ಮೀನುಗಳನ್ನ ಬೇರೆ ಬೇರೆ ಪ್ರದೇಶದಿಂದ ತಂದು ಮಾರಾಟ ಮಾಡಲಾಗುತ್ತದೆ. ಆದ್ರೆ ಮೀನುಗಳು ಕೆಡದಂತೆ ಅಪಾಯಕಾರಿ ರಾಸಾಯನಿಕ ಪದಾರ್ಥ ಬಳಸುವ ಆಘಾತಕಾರಿ ಅಂಶ ಇದೀಗ ಬೆಳಕಿಗೆ ಬಂದಿದೆ.