ಗೋವಾ ರಾಜ್ಯದ ಮಾರುಕಟ್ಟೆಯಲ್ಲಿ ಕರ್ನಾಟಕದ ಮೀನು ಮಾರಾಟಕ್ಕೆ ಪರವಾನಿಗೆ ನೀಡದಿದ್ದಲ್ಲಿ ಗೋವಾಕ್ಕೆ ಹಾಲು, ತರಕಾರಿ ಸರಬರಾಜು ಬಂದ್ ಮಾಡುವುದಾಗಿ ಉತ್ತರ ಕನ್ನಡ ಜಿಲ್ಲೆಯ ಮೀನುಗಾರರು ಎಚ್ಚರಿಕೆ ನೀಡಿದ್ದಾರೆ.ಹೊರ ರಾಜ್ಯಗಳ ಮೀನುಗಳನ್ನು ಸಂಪೂರ್ಣವಾಗಿ ನಿಷೇಧಿಸಿರುವ ಗೋವಾ ಸರ್ಕಾರದ ಧೋರಣೆಯನ್ನು ಖಂಡಿಸಿ ಹೆದ್ದಾರಿ ತಡೆದು ಇಲ್ಲಿನ ಮೀನುಗಾರರು ಪ್ರತಿಭಟನೆ ನಡೆಸಿದ್ದರು. ಪರಿಣಾಮವಾಗಿ ಇನ್ಸುಲೇಟರ್ ಲಾರಿಯಲ್ಲಿ (ಶೀತಲಿಕರಣ ಹೊಂದಿರುವ ಲಾರಿ) ಎಫ್ ಡಿ ಎ ಪರವಾನಿಗೆ ಪತ್ರದೊಂದಿಗೆ ತಂದಿರುವ ಮೀನುಗಳನ್ನು ಮಾತ್ರ ಗೋವಾಕ್ಕೆ ಸಾಗಿಸಲು