ಸಂತರು ಪೂಜ್ಯರು, ಗೋಮಾತೆ ಪೂಜ್ಯರಿಗೂ ಪೂಜ್ಯಳು. ಗೋವಿನ ತ್ಯಾಜ್ಯವೂ ಸರ್ವಮಾನ್ಯವಾದುದು. ಆದರೆ ಇಂದು ಗೋಹತ್ಯೆ ಮಾತ್ರವಲ್ಲ, ಗೋಕ್ಷೀರದ ಹತ್ಯೆಯೂ ನಡೆಯುತ್ತಿದೆ, ರಾಸಾಯನಿಕ ಬಳಸಿ ಹಾಲಿನಲ್ಲಿರುವ ಗುಣಗಳನ್ನು ಕೊಲ್ಲಲಾಗುತ್ತಿದ್ದು, ಹಾಲು ಎಂಬ ಹೆಸರಿನಲ್ಲಿ ಬಿಳಿದ್ರವವನ್ನು ಮಾರಲಾಗುತ್ತಿದೆ ಎಂದು ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಹೇಳಿದರು. ಶ್ರೀರಾಮಚಂದ್ರಾಪುರಮಠದ ಬೆಂಗಳೂರಿನ ಶಾಖಾಮಠದಲ್ಲಿ ನಡೆಯುತ್ತಿರುವ ಗೋಚಾತುರ್ಮಾಸ್ಯದ ಗೋಸಂದೇಶ ಸಭೆಯಲ್ಲಿ ಸಾನ್ನಿಧ್ಯವಹಿಸಿದ್ದ ಶ್ರೀಗಳು, ಗೋವನ್ನು ಜೀವನದೊಂದಿಗೆ ಜೋಡಿಸಿಕೊಳ್ಳಬೇಕು, ಹೊರತು ಮರಣದೊಂದಿಗಲ್ಲ. ನಿತ್ಯೋಪಯೋಗಿಯಾದ ಗವ್ಯೋತ್ಪನ್ನಗಳನ್ನು ಬಳಸುವ ಮೂಲಕ ಪರೋಕ್ಷವಾಗಿ