ನಮ್ಮ ಮೆಟ್ರೋ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಖುಷಿಯ ಸುದ್ದಿ. ನಿಮ್ಮ ಮೊಬೈಲ್ ಫೋನ್ನಲ್ಲೇ ಮೆಟ್ರೋ ರೈಲಿನ ರಿಯಲ್ ಟೈಮ್ ಸಂಚಾರದ ಮಾಹಿತಿ ಪಡೆಯಬಹುದಾಗಿದೆ. ಒಲಾ, ಊಬರ್, ಸ್ವಿಗ್ಗಿ, ಜೊಮಾಟೊ ಇತ್ಯಾದಿ ಅಪ್ಲಿಕೇಶನ್ಗಳಲ್ಲಿ ನೀವು ರಿಯಲ್ ಟೈಮ್ನಲ್ಲಿ ವಾಹನಗಳನ್ನು ಟ್ರ್ಯಾಕ್ ಮಾಡುವ ರೀತಿಯಲ್ಲೇ ಮೆಟ್ರೋ ರೈಲುಗಳ ಓಡಾಟವನ್ನು ಮೊಬೈಲ್ನಲ್ಲಿ ನೋಡಬಹುದಾಗಿದೆ. ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಗೂಗಲ್ ಸಂಸ್ಥೆಯೊಂದಿಗೆ ಈ ಒಪ್ಪಂದಕ್ಕೆ ಸಹಿ ಹಾಕಿದೆ. ಮೆಟ್ರೋ ನಿಲ್ದಾಣಗಳಲ್ಲಿ ರೈಲುಗಳ ಸಂಚಾರದ ಎಲ್ಲಾ