ಬೆಂಗಳೂರಿನಲ್ಲಿ ವಾಯು ವಿಹಾರಿಗಳಿಗೆ ಶೀಘ್ರವೆ ಗುಡ್ ನ್ಯೂಸ್ ಸಿಗಲಿದೆ . ಹೌದು ದಿನವಿಡೀ ಪಾರ್ಕ್ ಓಪನ್ ಇಡಲು ಪಾಲಿಕೆ ಚಿಂತನೆ ನಡೆಸಿದೆ. ಬೆಂಗಳೂರಿನಲ್ಲಿ ನಾನಾಕಾರಣಗಳಿಂದ ದಿನದಲ್ಲಿ ಕೆಲ ಸಮಯ ಮಾತ್ರ ಪಾರ್ಕ್ ಓಪನ್ ಮಾಡಲಾಗುತ್ತಿದೆ. ಈ ನಿಯಮ ಬದಲಾವಣೆಗೆ ಪಾಲಿಕೆ ಚಿಂತನೆ ಮಾಡಿದೆ. ಈ ಹಿಂದಿನಿಂದಲೂ ಪಾರ್ಕ್ ಓಪನ್ ಇಡಲು ಜನರು ಬೇಡಿಕೆ ಸಲ್ಲಿಸಿದ್ರು ಆದ್ರೆ ಪಾಲಿಕೆ ತನ್ನದೇ ಕೆಲ ಕಾರಣ ಕೊಟ್ಟು ದಿನದ ಕೆಲ ಸಮಯ ಮಾತ್ರ ಸೀಮಿತಗೊಳಿಸಿತ್ತು.