ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ಹೊಸದಾಗಿ ಪರಿಚಯಿಸಿರುವ ಕ್ಯೂಆರ್ ಕೋಡ್ ಟಿಕೆಟ್ ವ್ಯವಸ್ಥೆಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಕ್ಯೂಆರ್ ಟಿಕೆಟ್ ಪಡೆದು ನವೆಂಬರ್ ತಿಂಗಳಿನಲ್ಲಿ 2.1 ಲಕ್ಷ ಜನರು ಪ್ರಯಾಣಿಸಿದ್ದಾರೆ. ನವೆಂಬರ್ 1 ರಂದು ಹೊಸ ಸೌಲಭ್ಯವನ್ನು ಪ್ರಾರಂಭಿಸಲಾಗಿತ್ತು. ಬಿಎಂಆರ್ಸಿಎಲ್ ಪ್ರಕಾರ, ಕ್ಯೂಆರ್ ಕೋಡ್ ಬಳಸಿ ಪ್ರಯಾಣಿಸಿದವರ ಸಂಖ್ಯೆ ನವೆಂಬರ್ ಮೊದಲ ವಾರದಲ್ಲಿ ನಿತ್ಯದ ಸರಾಸರಿ 3,167 ಇತ್ತು. ಎರಡು, ಮೂರು ಹಾಗೂ ನಾಲ್ಕನೇ ವಾರದಲ್ಲಿ ಕ್ರಮವಾಗಿ