ಕನ್ನಡಕ್ಕೆ ಅವಮಾನ: ಕೊನೆಗೂ ಕನ್ನಡಿಗರ ಕ್ಷಮೆ ಕೇಳಿದ ಗೂಗಲ್ ಇಂಡಿಯಾ

ಬೆಂಗಳೂರು| Krishnaveni K| Last Modified ಶುಕ್ರವಾರ, 4 ಜೂನ್ 2021 (09:16 IST)
ಬೆಂಗಳೂರು: ಅತ್ಯಂತ ಕೆಟ್ಟ ಭಾಷೆ ಎಂದು ವಿವಾದಕ್ಕೊಳಗಾಗಿದ್ದ ಗೂಗಲ್ ಸಂಸ್ಥೆ ಕೊನೆಗೂ ತನ್ನ ಪ್ರಮಾದಕ್ಕೆ ಕನ್ನಡಿಗರ ಕ್ಷಮೆ ಯಾಚಿಸಿದೆ.  
> ಗೂಗಲ್ ನಲ್ಲಿ ಭಾರತದ ಅತ್ಯಂತ ಕೆಟ್ಟ ಭಾಷೆ ಯಾವುದು ಎಂಬ ಪ್ರಶ್ನೆಗೆ ಕನ್ನಡ ಎಂದು ಉತ್ತರ ಬರುತ್ತಿತ್ತು. ಇದರ ವಿರುದ್ಧ ಕನ್ನಡಿಗರು ಸಿಡಿದೆದ್ದಿದ್ದರು. ಇತರ ಭಾಷೆಯವರಿಂದಲೂ ಕನ್ನಡಿಗರಿಗೆ ಬೆಂಬಲ ಸಿಕ್ಕಿತ್ತು.>   ವಿವಾದ ದೊಡ್ಡ ಮಟ್ಟಕ್ಕೆ ತಿರುಗುತ್ತಿದ್ದಂತೇ ಗೂಗಲ್ ಇಂಡಿಯಾ ಪ್ರಕಟಣೆ ನೀಡಿ, ತಮ್ಮಿಂದಾದ ಪ್ರಮಾದಕ್ಕೆ ಕ್ಷಮೆ ಯಾಚಿಸುತ್ತೇವೆ. ಕನ್ನಡ ಅತ್ಯಂತ ಸುಂದರ ಭಾಷೆ ಎಂದಿದೆ.



ಇದರಲ್ಲಿ ಇನ್ನಷ್ಟು ಓದಿ :