ರವಿ ಕಾಣದ್ದನ್ನು ಕವಿ ಕಂಡ ಎಂಬಂತೆ ಹಚ್ಚ ಹಸರಿನ ಮಧ್ಯೆ ಕಲ್ಲಿನ ಮೇಲೆ ಕುಳಿತು ಏನನ್ನೋ ಬರೆಯುವಲ್ಲಿ ಮಗ್ನರಾಗಿರುವ ಕುವೆಂಪುರವರ ಸುಂದರವಾದ ಚಿತ್ರವನ್ನು ಸೇರಿಸುವ ಮೂಲಕ ಗೂಗಲ್ ಡೂಡಲ್ ನಮ್ಮ ರಾಷ್ಟ್ರಕವಿ ಕುವೆಂಪು ಅವರಿಗೆ 113 ನೇ ಜನ್ಮದಿನಕ್ಕೆ ಗೌರವ ಸಲ್ಲಿಸಿದೆ. ಅಲ್ಲದೇ ಹಿಂಬದಿಯಲ್ಲಿ ಕನ್ನಡದಲ್ಲಿ ಗೂಗಲ್ ಎಂದು ಬರೆದಿರುವುದನ್ನು ನಾವಿಂದು ಗೂಗಲ್ ಮುಖಪುಟದಲ್ಲಿ ಕಾಣಬಹುದು. ಈ ಚಿತ್ರವನ್ನು ಕೊಲ್ಕತ್ತಾದ ಚಿತ್ರ ಕಲಾವಿದ ಉಪಮಾನ್ಯು ಭಟ್ಟಾಚಾರ್ಯ ಅವರು ರಚಿಸಿದ್ದು ಸ್ವಾತಿ