ಬೆಂಗಳೂರು : ಡ್ರೋಣ್ ನಿಂದ ಕ್ರಿಮಿನಾಶಕ ಸಿಂಪಡಿಸಿದರೆ ದುಷ್ಪರಿಣಾಮವಾಗುವ ಹಿನ್ನಲೆ ಡ್ರೋಣ್ ನಿಂದ ಕ್ರಿಮಿನಾಶಕ ಸಿಂಪಡಿಸುವುದಕ್ಕೆ ಸರ್ಕಾರ ತಡೆಯೊಡ್ಡಿದೆ ಎಂಬುದಾಗಿ ತಿಳಿದುಬಂದಿದೆ. ಡ್ರೋಣ್ ನಿಂದ ಕ್ರಿಮಿನಾಶಕ ಸಿಂಪಡಿಸಿದರೆ ಸುತ್ತಮುತ್ತಲಿನ ಜಮೀನುಗಳಿಗೂ ವ್ಯಾಪಿಸಿ ತೊಂದರೆ ಸಾಧ್ಯತೆ ಇದೆ. ಹೀಗಾಗಿ ಇದರ ಸಾಧಕ-ಬಾಧಕ ಬಗ್ಗೆ ವರದಿ ನೀಡುವಂತೆ ರಾಯಚೂರು ಕೃಪಿ ವಿಶ್ವವಿದ್ಯಾಲಯಕ್ಕೆ ಸರ್ಕಾರ ಸೂಚನೆ ನೀಡಿದೆ ಎನ್ನಲಾಗಿದೆ. 18 ಲಕ್ಷ ರೂ. ವೆಚ್ಚದಲ್ಲಿ ಈ ಅವಿಷ್ಕಾರವನ್ನು ಮಾಡಲಾಗಿತ್ತು. ಕ್ರಿಮಿನಾಶಕ ಸಿಂಪಡಿಸುವುದಕ್ಕೆ ಡ್ರೋಣ್ ಸಿದ್ದಪಡಿಸಲಾಗಿತ್ತು