ಪೊಲೀಸ್ ದಾಳಿ ವೇಳೆ ಮನೆಯಲ್ಲಿ ಕೋಟಿ ಕೋಟಿ ನಿಷೇಧಿತ ನೋಟು ಪತ್ತೆಯಾಗಿ ಬಂಧನಕ್ಕೀಡಾಗಿದ್ದ ರೌಡಿ ಶೀಟರ್ ನಾಗರಾಜ್ ಮತ್ತು ಮಕ್ಕಳಾದ ಶಾಸ್ತ್ರೀ, ಗಾಂಧಿಗೆ ಜಾಮೀನು ಮಂಜೂರಾಗಿದೆ. 7 ಪ್ರಕರಣಗಳಲ್ಲಿ 2 ಲಕ್ಷ ರೂ. ಬಾಂಡ್ ಪಡೆದು ಹೈಕೋರ್ಟ್ ಏಕಸದಸ್ಯ ಪೀಠ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಪ್ರತೀ ಗುರುವಾರ ಮೂವರು ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗೆ ತೆರಳಿ ಸಹಿ ಹಾಕಬೇಕು, ಸಾಕ್ಷಿ ನಾಶಕ್ಕೆ ಯತ್ನಿಸಬಾರದು ಎಂಬ ಷರತ್ತು ವಿಧಿಸಲಾಗಿದೆ. ಈಗಾಗಲೇ