ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆ ಹಿನ್ನೆಲೆಯಲ್ಲಿ ದರ ಪರಿಷ್ಕರಣೆಯನ್ನು ತಡೆಹಿಡಿದಿದ್ದ ಸರಕಾರ ಇದೀಗ ಪ್ರತಿ ಯೂನಿಟ್ಗೆ 1.49 ಪೈಸೆ ಹೆಚ್ಚಳಗೊಳಿಸಿ ಆದೇಶ ಹೊರಡಿಸಿದೆ. ನಾಳೆ ನಡೆಯಲಿರುವ ಸಭೆಯಲ್ಲಿ ದರ ಏರಿಕೆಯನ್ನು ಸರಕಾರ ಪ್ರಕಟಿಸಲಿದ್ದು, ಬಿಸಿಲಿನ ಬೇಗೆಯಿಂದ ಕಂಗಾಲಾಗಿರುವ ಜನತೆಗೆ ಕರೆಂಟ್ ಶಾಕ್ ಮತ್ತಷ್ಟು ಬಿಸಿಯನ್ನು ಮುಟ್ಟಿಸಲಿದೆ. ಕರೆಂಟ್ ದರವನ್ನು ಹೆಚ್ಚಿಸುವಂತೆ ರಾಜ್ಯದ ಎಸ್ಕಾಂಗಳು ಸರಕಾರದ ಮುಂದೆ ಪ್ರಸ್ತಾವನೆ ಸಲ್ಲಿಸಿದ್ದವು. ಆದರೆ, ಉಪಚುನಾವಣೆ ನಿಮಿತ್ಯವಾಗಿ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ