ಸಚಿವರ ಕಾರು ಖರೀದಿಗಾಗಿ ರಾಜ್ಯ ಸರಕಾರ ದುಂದು ವೆಚ್ಚ ಮಾಡುತ್ತಿದ್ದು, ಇಲ್ಲಿಯವರೆಗೂ 9.34 ಕೋಟಿ ರೂಪಾಯಿ ದುಂದು ವೆಚ್ಚ ಮಾಡಿದೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಅವರು ಮಾಹಿತಿಯನ್ನು ಬಹಿರಂಗ ಪಡಿಸಿದ್ದಾರೆ. ರಾಜ್ಯ ಸರಕಾರದ ವತಿಯಿಂದ ಸಚಿವರಿಗಾಗಿ 55 ಇನ್ನೋವಾ ಕಾರುಗಳು ಹಾಗೂ ಒಂದು ಫಾರ್ಚೂನರ್ ಸೇರಿದಂತೆ 57 ಕಾರುಗಳನ್ನು ಖರೀದಿ ಮಾಡಿದೆ. ಆದರೆ, ರಾಜ್ಯ ಸಚಿವರು ಸರಕಾರದ ನಿಯಮವನ್ನು ಮೀರಿ ಪ್ರಯಾಣ ಭತ್ತೆಯನ್ನು ಪಡೆಯುತ್ತಿದ್ದಾರೆ