ಬೆಂಗಳೂರು: ನಿನ್ನೆ ನಡೆಯಬೇಕಿದ್ದ ವಿಶ್ವಾಸ ಮತ ಪ್ರಕ್ರಿಯೆ ಆಡಳಿತ, ವಿಪಕ್ಷಗಳ ಗದ್ದಲದಿಂದಾಗಿ ನಡೆದಿರಲಿಲ್ಲ. ಆದರೆ ಇಂದು ವಿಶ್ವಾಸಮತ ಸಾಬೀತುಪಡಿಸಲೇಬೇಕೆಂದು ರಾಜ್ಯಪಾಲ ವಜೂಬಾಯ್ ವಾಲಾ ಸಿಎಂ ಕುಮಾರಸ್ವಾಮಿಗೆ ಸಮಯ ನಿಗದಿ ಮಾಡಿದ್ದಾರೆ.ಇಂದು ಮಧ್ಯಾಹ್ನ 1.30 ರೊಳಗೆ ವಿಶ್ವಾಸ ಮತ ಸಾಬೀತುಪಡಿಸುವಂತೆ ಸಿಎಂಗೆ ರಾಜ್ಯಪಾಲರು ಪತ್ರಮುಖೇನ ಸೂಚನೆ ನೀಡಿದ್ದಾರೆ. ನಿನ್ನೆಯೇ ಸದನದ ನಡುವೆ ರಾಜ್ಯಪಾಲರು ಸಂದೇಶ ರವಾನಿಸಿದರೂ, ರಾಜ್ಯಪಾಲರಿಗೆ ಈ ವಿಚಾರದಲ್ಲಿ ಸೂಚನೆ ನೀಡುವ ಹಕ್ಕಿಲ್ಲ ಎಂದು ಆಡಳಿತ ಪಕ್ಷದ ಸದಸ್ಯರು ತಳ್ಳಿ