ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ಮಾಡಿದ ರಾಜ್ಯಪಾಲ ವಜುಭಾಯಿವಾಲಾ

ಬೆಂಗಳೂರು, ಶನಿವಾರ, 26 ಜನವರಿ 2019 (10:17 IST)

ಬೆಂಗಳೂರು : 70ನೇ ಹಿನ್ನಲೆಯಲ್ಲಿ ಮಾಣಿಕ್ ಷಾ ಪೆರೇಡ್ ಮೈದಾನದಲ್ಲಿ ಸಕಲ ಸಿದ್ದತೆ ನಡೆದಿದ್ದು, ಇದೀಗ ಮಾನ್ಯ ರಾಜ್ಯಪಾಲ ವಜುಭಾಯಿವಾಲಾರು ಕಾರ್ಯಕ್ರಮವನ್ನು ನೇರವೆರಿಸಿದ್ದಾರೆ.

ನಂತರ ರಾಜ್ಯದ ಜನರನ್ನುದ್ದೇಶಿಸಿ ಮಾತನಾಡಿದ ಅವರು ರಾಜ್ಯದ ಜನತೆಗೆ ಗಣರಾಜ್ಯೋತ್ಸವ ತಿಳಿಸಿದ್ದಾರೆ. ‘ಕೊಡಗು, ಮಲೆನಾಡು ಭಗದಲ್ಲಿ ಪ್ರಾಕೃತಿಕ ವಿಕೋಪವಾಗಿತ್ತು. ಕೇಂದ್ರ, ರಾಜ್ಯದ ಸಹಭಾಗಿತ್ವದಲ್ಲಿ ತುರ್ತು ಪರಿಹಾರ ಕಾರ್ಯ ಕೈಗೊಳ್ಳಲಾಗಿತ್ತು.ಅಲ್ಲದೇ ರಾಜ್ಯದ ಬಹುತೇಕ ತಾಲೂಕುಗಳು ಬರಗಾಲದಿಂದ ತತ್ತರಿಸಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಬರಗಾಲ ಪರಿಸ್ಥಿತಿ ಇದೆ ಎಂಬುದಾಗಿ ತಿಳಿಸಿದ್ದಾರೆ.

 

ಹಾಗೇ ‘ಬಡವರ ಬಂಧು ಯೋಜನೆಯಿಂದ ವ್ಯಾಪಾರಿಗಳಿಗೆ ಅನುಕೂಲವಾಗಿದೆ. ರಾಜ್ಯದಲ್ಲಿ ರೈತರ ಸಾಲಮನ್ನಾ ಯೋಜನೆ ಜಾರಿ ಪ್ರಗತಿಯಲ್ಲಿದೆ. ನರೇಗಾ ಯೋಜನೆಯಡಿ ಹಲವು ಜಿಲ್ಲೆಗಳಲ್ಲಿ ಪರಿಹಾರ ಕಾರ್ಯಕೈಗೊಳ್ಳಲಾಗಿದೆ. 309 ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ. ಸ್ವಚ್ಛ ಭಾರತ್ ಯೋಜನೆ ಮೂಲಕ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಮುಖ್ಯಮಂತ್ರಿ ಆವಾಸ್ ಯೋಜನೆಯಡಿ ಸೂರಿಲ್ಲದವರಿಗೆ ಮನೆ ನಿರ್ಮಾಣ ಮಾಡಿ ಕೊಡಲಾಗಿದೆ. 2014 ರಿಂದ 2019ರವರೆಗೆ ಉದ್ಯೋಗ ಸೃಷ್ಠಿಗೆ ಯೋಜನೆ ಅನುಮೋದನೆ ನೀಡಲಾಗಿದೆ ‘ ಎಂದು ಅವರು ತಿಳಿಸಿದ್ದಾರೆ.

 

ಇನ್ನೂ 70ನೇ ಗಣರಾಜ್ಯೋತ್ಸವ ಹಿನ್ನಲೆಯಲ್ಲಿ ವಿವಿಧ ಶಾಲೆಗಳ ಮಕ್ಕಳು, ಸ್ಕೌಟ್ಸ್ ಮತ್ತು ಗೈಡ್ಸ್, ಎನ್.ಸಿ.ಸಿ., ಸೇವಾದಳ ಸೇರಿದಂತೆ 38 ತುಕಡಿಗಳು, ಭಾರತೀಯ ಸೇನಾಪಡೆಯ ಅಶ್ವಾರೋಹಿ ಪಡೆ ಪಥಸಂಚಲನದಲ್ಲಿ ಭಾಗಿಯಾಗಿವೆ. ಇನ್ನೂ ಧ್ವಜಾರೋಹಣದಲ್ಲಿ ಸಿಎಂ‌ ಕುಮಾರಸ್ವಾಮಿ ಭಾಗಿಯಾಗಿದ್ದಾರೆ. ಗಣರಾಜ್ಯೋತ್ಸವ ಸಂಭ್ರಮ ಹಿನ್ನೆಲೆಯಲ್ಲಿ ಮಾಣಿಕ್ ಷಾ ಮೈದಾನದ ಸುತ್ತಮುತ್ತ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.

 

ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರು, ಸಾರ್ವಜನಿಕರು, ಸ್ವಾತಂತ್ರ್ಯ ಹೋರಾಟಗಾರರಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಲಾಗಿದೆ. ಮೈದಾನದೊಳಗೆ ನೀರಿನ ಬಾಟಲಿ, ಸಿಗರೇಟ್, ಬೆಂಕಿ ಪೊಟ್ಟಣ, ಕರಪತ್ರಗಳು ಮತ್ತು ಮಾದಕವಸ್ತು ಯಾವುದೇ ರೀತಿಯ ಬಾವುಟ ಮೈದಾನದೊಳಗೆ ತರಲು ನಿಷೇಧ ಹೇರಲಾಗಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ದೆಹಲಿಯಲ್ಲಿ 70 ನೇ ಗಣರಾಜ್ಯೋತ್ಸವದ ಸಂಭ್ರಮ; ಧ್ವಜಾರೋಹಣ ಮಾಡಿದ ರಾಷ್ಟ್ರಪತಿ

ನವದೆಹಲಿ : ಇಂದು ದೇಶದೆಲ್ಲೆಡೆ 70 ನೇ ಗಣರಾಜ್ಯೋತ್ಸವದ ಸಂಭ್ರಮದ ಹಿನ್ನಲೆಯಲ್ಲಿ ರಾಷ್ಟ್ರ ರಾಜಧಾನಿ ...

news

ಕೇಂದ್ರ ಸರ್ಕಾರದಿಂದ ಭಾರತ ರತ್ನ ಪ್ರಶಸ್ತಿಗೆ ಮೂವರ ಹೆಸರು ಘೋಷಣೆ; ಸಿದ್ಧಗಂಗಾ ಶ್ರೀಗಳಿಗಿಲ್ಲ ಭಾರತರ‍ತ್ನ

ನವದೆಹಲಿ : ದೇಶದ 70ನೆಯ ಗಣರಾಜ್ಯೋತ್ಸವದ ಸಂದರ್ಭದಲ್ಲಿ, ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ಭಾರತ ...

news

2ನೇ ತರಗತಿ ಬಾಲಕಿಯ ಮೇಲೆ ಶಾಲಾ ಮುಖ್ಯೋಪಾಧ್ಯಾಯನಿಂದ ಅತ್ಯಾಚಾರ

ಅಮರಾವತಿ : ಶಾಲಾ ಮುಖ್ಯೋಪಾಧ್ಯಯರೊಬ್ಬ 2ನೇ ತರಗತಿ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಆಂಧ್ರಪ್ರದೇಶದ ...

news

ರಸ್ತೆಯಲ್ಲಿ ಹೋಗುತ್ತಿದ್ದಾಗ ಲೈಂಗಿಕ ಕಿರುಕುಳ ನೀಡಿದ ಕಾಮುಕರಿಗೆ ತಕ್ಕ ಶಿಕ್ಷೆ ಕೊಡಿಸಿದ ವಿದ್ಯಾರ್ಥಿನಿ

ಬೆಂಗಳೂರು : ರಸ್ತೆಯಲ್ಲಿ ನಡೆದುಕೊಂಡ ಹೋಗುತ್ತಿದ್ದ ವಿದ್ಯಾರ್ಥಿನಿಗೆ ಬೈಕ್ ನಲ್ಲಿ ಬಂದ ಕಾಮುಕರಿಬ್ಬರು ...