ಬಾಗಲಕೋಟೆ : ಆರ್ಎಸ್ಎಸ್ ಯಾವುದೇ ಪಕ್ಷಕ್ಕೆ ಸೀಮಿತವಾಗಿಲ್ಲ. ಜೆಡಿಎಸ್ ಆಗಲಿ ಬೇರೆಯವರಾಗಲಿ ಚುನಾವಣೆಯಲ್ಲಿ ಎದುರಿಸಬೇಕಿರುವುದು ಬಿಜೆಪಿಯನ್ನ ಹೊರತು ಆರ್ಎಸ್ಎಸ್ ಅಲ್ಲ. ಹೀಗಾಗಿ ವಿನಾಕಾರಣ ಸಂಘಟನೆಯನ್ನು ಚರ್ಚೆಗೆ ಎಳೆಯಬೇಡಿ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಎಚ್ಚರಿಕೆ ನೀಡಿದರು. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್ಎಸ್ಎಸ್ ಭಾರತೀಯ ಸಂಸ್ಕೃತಿ ಉಳಿಸಿ ಬೆಳೆಸುವ, ಧರ್ಮ ರಕ್ಷಣೆಯ ಉದ್ದೇಶ ಹೊಂದಿದೆ ಎಂದರು. ದೇವೆಗೌಡರು ಪ್ರಧಾನಿ