ಬೆಂಗಳೂರು: ಕೊರೋನಾ ಮೂರನೇ ಅಲೆ ತಡೆಯಲು ರಾಜ್ಯ ಸರ್ಕಾರ ಈಗಿನಿಂದಲೇ ತಯಾರಿ ನಡೆಸಲು ಆರಂಭಿಸಿದೆ. ಮೂರನೇ ಅಲೆ ಮಕ್ಕಳ ಮೇಲೆ ಅದರಲ್ಲೂ ಪೌಷ್ಠಿಕತೆಯ ಕೊರತೆಯಿಂದ ಬಳಲುತ್ತಿರುವ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಲಿದೆ ಎಂಬ ವರದಿ ಬೆನ್ನಲ್ಲೇ ತಜ್ಞರ ಸಮಿತಿ ಅಪೌಷ್ಠಿಕತೆ ನಿವಾರಿಸಲು ಈ ವಾರವೇ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ.ಈ ವರದಿಯನ್ವಯ ಸರ್ಕಾರ ಮಕ್ಕಳ ಅಪೌಷ್ಠಿಕತೆ ನಿವಾರಿಸಲು ಕ್ರಮ ಕೈಗೊಳ್ಳಲಿದೆ. ಅಪೌಷ್ಠಿಕತೆ ನಿವಾರಿಸಲು ಅಂಗನವಾಡಿ ಮಕ್ಕಳಿಗೆ ಮೊಟ್ಟೆ, ಹಾಲು