ಜೆಡಿಎಸ್ ಮಹಿಳಾ ಸಮಾವೇಶದಲ್ಲಿ ಪಕ್ಷದ ವರಿಷ್ಠ ದೇವೇಗೌಡರ ಸೊಸೆಯರೇ ಗೈರು ಹಾಜರಾಗಿರುವುದು ಕಂಡು ಬಂದಿದೆ ಎಂದು ಮೂಲಗಳು ತಿಳಿಸಿವೆ. ನಗರದ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿರುವ ಬೃಹತ್ ಜೆಡಿಎಸ್ ಮಹಿಳಾ ಸಮಾವೇಶಕ್ಕೆ ಗೌಡರ ಸೊಸೆಯಂದಿರಾದ ಅನಿತಾ ಕುಮಾರಸ್ವಾಮಿ ಮತ್ತು ಭವಾನಿ ರೇವಣ್ಣ ಗೈರುಹಾಜರಾಗಿದ್ದಾರೆ. ಟಿಕೆಟ್ ಆಕಾಂಕ್ಷಿಗಳಾಗಿರುವ ಇಬ್ಬರೂ ಜೆಡಿಎಸ್ ಪಕ್ಷವೇ ಆಯೋಜಿಸಿದ ಮಹಿಳಾ ಸಮಾವೇಶಕ್ಕೆ ಗೈರುಹಾಜರಾಗಿರುವುದು ಪಕ್ಷದ ವರಿಷ್ಛರಲ್ಲಿ ಭಿನ್ನಮತ ಎದುರಾಗಿದೆಯೇ ಎನ್ನುವ ಅನುಮಾನಕ್ಕೂ ಕಾರಣವಾಯಿತು ಎಂದು ಮೂಲಗಳು