Widgets Magazine

ಮೋದಿ ನಡುವಳಿಕೆ ಸುಧಾರಿಸಿಕೊಳ್ಳಲಿ ಎಂದ ಗೌಡ್ರು

ಶಿವಮೊಗ್ಗ| Jagadeesh| Last Updated: ಸೋಮವಾರ, 18 ಮಾರ್ಚ್ 2019 (15:48 IST)
ಕಳೆದ ಐದು ವರ್ಷಗಳಲ್ಲಿ ದೇಶದ ವ್ಯವಸ್ಥೆಯಲ್ಲಿ ಹಲವು ಮಾರ್ಪಾಡುಗಳಾಗಿವೆ. ನಾನು ವ್ಯಕ್ತಿಗತವಾಗಿ ಮಾತನಾಡುವುದಿಲ್ಲ. ನರೇಂದ್ರ ಮೋದಿ ತಮ್ಮ‌ ನಡುವಳಿಕೆಯನ್ನ ಸುಧಾರಣೆ ಮಾಡಿಕೊಳ್ಳಬೇಕು. ಹೀಗಂತ ಜೆಡಿಎಸ್ ವರಿಷ್ಠ ಸಲಹೆ ಮಾಡಿದ್ದಾರೆ.

ಶಿವಮೊಗ್ಗದಲ್ಲಿ ಮಾಜಿ ಪ್ರಧಾನಿ ಹೇಳಿಕೆ ನೀಡಿದ್ದು, ಪ್ರಧಾನಿ ಮೋದಿಯವರು ದೇಶವನ್ನ ಎಲ್ಲಿಗೆ ಕೊಂಡ್ಯೊಯಲ್ಲಿದ್ದಾರೆ ಎನ್ನುವ ಅನುಮಾನ ಕಾಡುತ್ತಿದೆ. ಸಂಸತ್ ನಲ್ಲಿ ಹೆಚ್ಚು ಮಾತನಾಡಲು ಅವಕಾಶ ನೀಡಿಲ್ಲ.

ನಮಗೆ
ನಮಗೆ ಸಂಖ್ಯಾ ಬಲ ಇಲ್ಲ ಆದ್ದರಿಂತ ನಮಗೆ ಮಾತನಾಡಲು 2 ರಿಂದ 3 ನಿಮಿಷ ಕಾಲಾವಕಾಶ ನೀಡುತ್ತಾರೆ.
ಮೋದಿ ಪ್ರಧಾನಿಯಾದ ಬಳಿಕ ಬಹುತೇಕ ಎಲ್ಲ ರಾಷ್ಟಗಳಿಗೆ ಹೋಗಿದ್ದಾರೆ. ಈ ಕಾರಣದಿಂದ ನಮ್ಮ ದೇಶದ ವೈರಿ ಯಾರು ಅಂತ ಗುರುತಿಸಲು ಕಷ್ಟವಾಗಿದೆ ಎಂದರು.

ಮೋದಿ ಒಮ್ಮ ಅವರ ತಾಯಿ‌ ಆಶೀರ್ವಾದ ಪಡೆಯಲು ಗುಜರಾತ್ ಗೆ ಹೋಗಿದ್ದರು, ಅವರಿದ್ದ ಸ್ಥಳಕ್ಕೆ ಚೀನಾದ ಅಧ್ಯಕ್ಷರನ್ನ ಕರೆಸಿದ್ದರು.

ನಾನು ಪ್ರಧಾನಿಯಾಗುವುದಕ್ಕೂ ಮುಂಚಿನ ಪ್ರಧಾನಿಗಳು ಯಾರು ಕಾಶ್ಮೀರಕ್ಕೆ ಭೇಟಿ ನೀಡಿರಲಿಲ್ಲ.

ನಾನು ಪ್ರಧಾನಿಯಾದ ಬಳಿಕ ಕಾಶ್ಮೀರಕ್ಕೆ ಭೇಟಿ ನೀಡಿದೆ. ನಾನು ಬರುತ್ತಿದ್ದೇನೆ ಅಂತ ಅಲ್ಲಿನ ರಾಜ್ಯಪಾಲರು ಸೇರಿದಂತೆ ನನಗೆ ಆತ್ಮೀಯವಾಗಿ ಬರಮಾಡಿಕೊಂಡರು. ಅಲ್ಲಿನವರು ಸಾಕಷ್ಟು ಮಂದಿ‌
ಜೀವನವನ್ನ ಸಾಗಿಸುವುದಕ್ಕೆ ಕಷ್ಡವಾಗಿದೆ ಎಂದು ಹೇಳಿದ್ದರು. ಆಗ ನಾನು ಅಲ್ಲಿನ ಸಮಸ್ಯೆಗೆ ಪರಿಹಾರ ಮಾಡಲು ಮುಂದಾಗಿ ರೈಲ್ವೆ ಸೇರಿದಂತೆ ಹಲವು ಯೋಜನೆಗಳನ್ನ ಕಾಶ್ಮೀರಕ್ಕೆ ಕೂಡುಗೆಯನ್ನಾಗಿ ನೀಡಿದೆ ಎಂದರು.


ಇದರಲ್ಲಿ ಇನ್ನಷ್ಟು ಓದಿ :