ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪರಶುರಾಮ್ ವಾಗ್ಮೋರೆ ಪೋಷಕರನ್ನು ಬೆಂಗಳೂರಿಗೆ ಕರೆಸಿದ ಬಗ್ಗೆ ಎಸ್ಐಟಿ ಸ್ಪಷ್ಟನೆ ನೀಡಿದೆ.ಪರಶುರಾಮ್ ಸ್ನೇಹಿತ ರಾಕೇಶ್ ಮಠ ವಿಚಾರಣೆಗೆ ಆಗಮಿಸುವಾಗ ಜತೆಗೆ ತಂದೆ ಅಶೋಕ್ ವಾಗ್ಮೋರೆ ಕೂಡಾ ಬಂದಿದ್ದರು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಎಸ್ಐಟಿ ಪೋಷಕರನ್ನು ವಿಚಾರಣೆಗೊಳಪಡಿಸುವ ಇರಾದೆ ಇಲ್ಲ ಎಂದಿದೆ.ವಿಚಾರಣೆ ಸಂದರ್ಭ ಪರಶುರಾಮ್ ಪೋಷಕರನ್ನು ನೋಡಬೇಕೆಂದು ಅಳುತ್ತಿದ್ದ. ಹಾಗಾಗಿ ಫೋನ್ ಮಾಡಲು ಅವಕಾಶ ಕೊಟ್ಟೆವು. ಫೋನ್ ನಲ್ಲೂ