ಯೂ-ಟ್ಯೂಬ್ ನೋಡಿ ಮನೆ ದರೋಡೆಗೆ ಮುಂದಾದ ಪದವೀಧರ ಗೆಳೆಯ, ಗೆಳತಿ ಪೊಲೀಸರ ಬಲೆಗೆ ಸಿಕ್ಕು ಬಿದ್ದಿದ್ದಾರೆ. ಆರೋಪಿಯಾದ ಯುವತಿ ಇಂಜಿನಿಯರ್ ಪದವೀಧರೆಯಾಗಿದ್ದು, ಯತೀಶ್ ಪೋಸ್ಟ್ ಗ್ರ್ಯಾಜುಯೇಟ್ ಎನ್ನಲಾಗಿದೆ. ಹಣದ ಬರವನ್ನು ನೀಗಿಸಲು ದರೋಡೆಗೆ ಮುಂದಾಗಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪಟ್ಟಣದ ಮುನೇಶ್ವರ್ ನಗರದಲ್ಲಿರುವ ಸುರೇಶ್ ಮತ್ತು ಲಕ್ಷ್ಮಿ ದಂಪತಿಗಳ ಮನೆಯ ಮುಂದೆ ಹಾಕಿದ ಬಾಡಿಗೆಗೆ ಖಾಲಿಯಿದೆ ಎನ್ನುವ ಬೋರ್ಡ್ ನೋಡಿದ ಆರೋಪಿಗಳು, ಮನೆಯೊಳಗೆ ತೆರಳಿ ಬಾಡಿಗೆಗೆ