ಇತ್ತೀಚಿಗೆ ಸಾಮಾಜಿಕ ಜಾಲತಾಣಗಳ ಸದುಪಯೋಗಕ್ಕಿಂತ ದುರುಪಯೋಗವೇ ಹೆಚ್ಚಾಗುತ್ತಿದೆ. ಕೆಲ ಜನಪ್ರತಿನಿಧಿಗಳಿಗಂತೂ ಇವು ಆರೋಪ-ಪ್ರತ್ಯಾಪರೋಪಗಳನ್ನು ಮಾಡಿಕೊಳ್ಳಲಿರುವ ಮಾಧ್ಯಮಗಳಾಗಿ ಬದಲಾಗಿವೆ. ಅದಕ್ಕೊಂದು ಸ್ಪಷ್ಟ ನಿದರ್ಶನ ಮೈಸೂರಿನಲ್ಲಿ ನಡೆದಿರುವ ಈ ಪ್ರಕರಣ. ಸಾಮಾಜಿಕ ಜಾಲತಾಣ ಫೇಸ್ಬುಕ್ ಜಗಳ ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ಮೈಸೂರು ಗ್ರಾಮೀಣ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಅಷ್ಟಕ್ಕೂ ನಡೆದಿದ್ದೇನು: ಶ್ರೀರಾಂಪುರ ಗ್ರಾಮಪಂಚಾಯತ್ ಉಪಾಧ್ಯಕ್ಷೆ ಉಷಾ ಎನ್ನುವವರು, ಅಧ್ಯಕ್ಷರಿಗೆ ಕೆಲಸ ಮಾಡೋಕ್ಕಿಂತ ದುಡ್ಡ ಮಾಡೋದೆ ಕೆಲಸ. ಅವರ ಟಾರ್ಗೆಟ್