ಕಾರ್ಯ ವೈಖರಿಯನ್ನು ಪ್ರಶ್ನೆ ಮಾಡಿದ ಗ್ರಾಮಸ್ಥರಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹಲ್ಲೆ ಮಾಡಿ ದರ್ಪ ತೋರಿದ ಘಟನೆ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ತೋರಣದಿನ್ನಿಯಲ್ಲಿ ನಡೆದಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದಮ್ಮ ಕಚೇರಿ ಹೊರಗಡೆಯೇ ಚಪ್ಪಲಿ ಹಿಡಿದು ಗ್ರಾಮಸ್ಥ ಬಸವರಾಜ್ ಅವರ ಕಾಲರ್ ಹಿಡಿದು ಹಲ್ಲೆ ಮಾಡಿದ್ದಾರೆ. ಗ್ರಾಮದ ಕಸ ವಿಲೆವಾರಿ ವಾಹನದ ಚಾಲಕ ತಮ್ಮ ಸಂಬಂಧಿಯನ್ನೇ ಚಂದಮ್ಮ ಅನಧಿಕೃತವಾಗಿ ನೇಮಿಸಿಕೊಂಡಿದ್ದಕ್ಕೆ ಗ್ರಾಮಸ್ಥರು ಪ್ರಶ್ನಿಸಿದ್ದರು. ಇದಕ್ಕೆ ಸಿಟ್ಟಾದ ಅಧ್ಯಕ್ಷೆ ಚಂದಮ್ಮ