ಕೊಳ್ಳೇಗಾಲಕ್ಕೆ ಆಗಮಿಸಿದ ಶಾಸಕರ ಮೇಲೆ ಬಿಜೆಪಿ ಕಾರ್ಯಕರ್ತರು ಹಾಗೂ ಮಹೇಶ್ ಬೆಂಬಲಿಗರಿಂದ ಹೂ ಮಳೆ ಸುರಿಸಿ ಸ್ವಾಗತ ಕೋರಲಾಯಿತು. ಕೊಳ್ಳೇಗಾಲ ಪಟ್ಟಣದ ಅಚ್ಗಳ್ ಸರ್ಕಲ್ ನಿಂದ ಪ್ರವಾಸಿ ಮಂದಿರದ ವರೆಗೆ ಬೈಕ್ ರಾಲಿ ನಡೆಸಲಾಯಿತು. ಕೊಳ್ಳೇಗಾಲದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ತರಲು ರಾಜ್ಯಾದ್ಯಂತ ಪಕ್ಷವನ್ನು ಸಂಘಟಿಸುವ ಕೆಲಸ ಮಾಡುತ್ತೇನೆ ಎಂದರು. ರಾಜ್ಯದಲ್ಲಿರುವ ನನ್ನ ಬೆಂಬಲಿಗರು ಮತ್ತು ನಾನು ಪಕ್ಷವನ್ನು ಸಂಘಟಿಸುವ ಕೆಲಸ ಮಾಡುತ್ತೇನೆ.