ಕೋಪದಿಂದ ತಳ್ಳಿ ಅಜ್ಜಿಯನ್ನು ಕೊಂದ ಮೊಮ್ಮಗ ಕೊರಿಯನ್ ವೆಬ್ ಸೀರಿಸ್ ನೋಡಿ ಹೆಣ ಸುಟ್ಟು ಬಚಾವಾಗಲು ಯತ್ನಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ಗಾಯತ್ರಿಪುರಂ ನಿವಾಸಿ ಸುಲೋಚನ ಮೃತ ಅಜ್ಜಿ. ಸುಪ್ರೀತ್ ಅಜ್ಜಿ ಕೊಂದ ಮೊಮ್ಮಗ. ಹೆಣವನ್ನು ಪ್ಯಾಕ್ ಮಾಡಿ ಕಾರಿನಲ್ಲಿಟ್ಟುಕೊಂಡು ದಿನವಿಡಿ ಓಡಾಡಿದ್ದಾನೆ. ಅಜ್ಜಿ ಹೆಣ ಕಾರಿನಲ್ಲೇ ಇಟ್ಟುಕೊಂಡು ಮಿಸ್ಸಿಂಗ್ ಕಂಪ್ಲೆಂಟ್ ನೀಡಿದ್ದ. ನಂತರ ಮಾತಿನ ವರಸೆ ಬದಲಿಸಿ ಕಡೆಗೆ ಪೊಲೀಸರ ಮುಂದೆ ಸಿಕ್ಕಿಬಿದ್ದಿದ್ದಾನೆ.