80 ವರ್ಷದ ಅಜ್ಜಿಯನ್ನು ಕೊಂದು ಅಂಗಾಂಗವನ್ನು ಎಸೆದ ಮೊಮ್ಮಗ

ಮುಂಬೈ| pavithra| Last Modified ಗುರುವಾರ, 15 ಅಕ್ಟೋಬರ್ 2020 (09:34 IST)
ಮುಂಬೈ : 80 ವರ್ಷದ ಅಜ್ಜಿಯನ್ನು 25 ವರ್ಷದ ಮೊಮ್ಮಗನೊಬ್ಬ  ಕತ್ತು ಸೀಳಿ ಕೊಲೆ ಮಾಡಿದ್ದಲ್ಲದೇ ಆಕೆಯ ದೇಹದ ಅಂಗಾಂಗಗಳನ್ನು ರೂಂ ತುಂಬಾ ಎಸೆದ ಘಟನೆ ಮುಂಬೈನಲ್ಲಿ ನಡೆದಿದೆ.
ಕ್ರಿಸ್ಟೋಫರ್ ಡಯಾಸ್  ಆರೋಪಿಯಾಗಿದ್ದು, ರೋಸಿ ಮೃತಪಟ್ಟ ಅಜ್ಜಿ. ಕ್ರಿಸ್ಟೋಫರ್ ಪೋಷಕರು ಇಸ್ರೆಲ್ ನಲ್ಲಿದ್ದ ಕಾರಣ ಅಜ್ಜಿಯ ಜೊತೆ ವಾಸವಾಗಿದ್ದ. ಈತ ಡ್ರಗ್ ವ್ಯಸನಿಯಾಗಿದ್ದ, ಆದಕಾರಣ ಮನೆಗೆ ಬಂದ ಸಂಬಂಧಿಕರ ಬಳಿ ಆತನ ಬಳಿ ಮಾತನಾಡದಂತೆ ಹೇಳಿದ್ದಾರೆ. ಇದರಿಂದ ಕೋಪಗೊಂಡ ಆತ ರಾತ್ರಿ ಅಜ್ಜಿ ಮಲಗಿದ್ದಾಗ ಚಾಕುವಿನಿಂದ ಅಜ್ಜಿಯ ಕತ್ತು ಸೀಳಿ ಕೊಂದು ಆಕೆಯ ದೇಹದ ಅಂಗಾಂಗಗಳನ್ನು ಕತ್ತರಿಸಿ ರೂಮಿನ ತುಂಬಾ ಎಸೆದಿದ್ದಾನೆ.> > ಇದನ್ನು ಕಂಡ ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.


ಇದರಲ್ಲಿ ಇನ್ನಷ್ಟು ಓದಿ :