Normal 0 false false false EN-US X-NONE X-NONE ಬೆಂಗಳೂರು : ಕೊರೊನಾ ವೈರಸ್ ಕಾಟದ ನಡುವೆ ಇದೀಗ ಮಹಾರಾಷ್ಟ್ರದ ಬಳಿಕ ರಾಜ್ಯಕ್ಕೂ ಮಿಡತೆ ಕಾಟ ಎದುರಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈಗಾಗಲೇ ಮಿಡತೆ ದಾಳಿಗೆ ಉತ್ತರ ಭಾರತ ತತ್ತರಿಸಿ ಹೋಗಿದೆ ಪಾಕ್ ಮೂಲಕ ಭಾರತಕ್ಕೆ ನುಗ್ಗಿದ ಮಿಡತೆ ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ, ಉತ್ತರಪ್ರದೇಶ, ಮಹಾರಾಷ್ಟ್ರದಲ್ಲಿ ಕಾಟ ನೀಡುತ್ತಿವೆ. ಮಿಡತೆಗಳ ದಾಳಿಯಿಂದ ಅಪಾರ ಬೆಳೆ ನಾಶವಾಗಿದೆ.