ಬಿಸಿಲ ನಾಡಲ್ಲಿ ತಂಪು ನೀಡುವ ಮರಗಳನ್ನು ಮತ್ತು ತೋಟಗಾರಿಕೆ ಬೆಳೆಗಳನ್ನು ಬೆಳೆಸಿ ಅತ್ಯಾಶ್ಚರ್ಯವಾಗುವ ಜತೆಗೆ ರೈತರೊಬ್ಬರು ಮಾದರಿಯಾಗಿದ್ದಾರೆ.ನಲವತ್ತು ವರ್ಷದ ಲಕ್ಷ್ಮೀಕಾಂತ ಹಿಬಾರೆಯವರದು ಕೃಷಿ ಕುಟುಂಬವಲ್ಲದಿದ್ದರೂ ಕಲಬುರಗಿ ಜಿಲ್ಲೆಯಂತಹ ಬಿಸಿಲ ನಾಡಲ್ಲಿ ತಂಪು ನೀಡುವ ಮರಗಳನ್ನು ಮತ್ತು ತೋಟಗಾರಿಕೆ ಬೆಳೆಗಳನ್ನು ಬೆಳೆಸಿದ್ದಾರೆಂದರೆ ಅತ್ಯಾಶ್ಚರ್ಯ. ಕಾಡಿನಲ್ಲಿ ಬೆಳೆಯಬೇಕಾದ ಮರಗಳನ್ನು ಇದೇನು ಕಾಡೋ ಅಥವಾ ಹೊಲವೋ ಎನ್ನುವಂತೆ ಕಲಬುರಗಿ ತಾಲೂಕಿನ ಹಾಗರಗಾ ಗ್ರಾಮದಲ್ಲಿ ಹಿರಿಯರು ಖರೀದಿಸಿದ 3.5 ಎಕರೆಯಲ್ಲಿ ಬೆಳೆಸಿ ಅರಣ್ಯ-ಕೃಷಿಯಲ್ಲಿ ಗಣನೀಯ ಸಾಧನೆಗೈದಿದ್ದಾರೆ.ಕೃಷಿ