ಬೆಂಗಳೂರು : ಸಿದ್ದರಾಮಯ್ಯ ಅಮೃತ ಮಹೋತ್ಸವಕ್ಕೆ ಒಂದೇ ದಿನ ಇದ್ದು, ದಾವಣಗೆರೆಯಲ್ಲಿ ಭರದ ಸಿದ್ಧತೆ ನಡೆಯುತ್ತಿದೆ.ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ 50 ಎಕರೆ ವಿಸ್ತಾರವಾದ ಶಾಮನೂರು ಪ್ಯಾಲೇಸ್ ಗ್ರೌಂಡ್ನಲ್ಲಿ ಅರಮನೆ ಮಾದರಿಯ ಬೃಹತ್ ವೇದಿಕೆ ಸಿದ್ಧವಾಗಿದೆ.ವೇದಿಕೆಯ ಮೇಲೆ ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿಕೆಶಿ, ಪರಮೇಶ್ವರ್, ಖರ್ಗೆ ಸೇರಿದಂತೆ ಕೇವಲ 45 ಜನ ಮುಖ್ಯ ಗಣ್ಯರಿಗೆ ಕೂರಲು ಅವಕಾಶ ನೀಡಲಾಗಿದೆ. ಹಾಗೆಯೇ ವೇದಿಕೆ ಮುಂಭಾಗದಲ್ಲಿ 6 ಲಕ್ಷ ಜನರಿಗೆ ಆಸನಗಳು ಸಜ್ಜಾಗಿವೆ.