ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಮೂಲಕ ಭಾರಿ ಸದ್ದು ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ, ನಾಲ್ಕು ತಿಂಗಳಲ್ಲಿ 4 ಗ್ಯಾರಂಟಿಗಳಿಗೆ ಬರೋಬ್ಬರಿ 6,392 ಕೋಟಿ ರೂ. ವೆಚ್ಚ ವ್ಯಯಿಸಿದೆ.. ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿಗಳು ಹಂತ ಹಂತವಾಗಿ ಜಾರಿಯಾಗಿದ್ದು, ಕೊನೆಯದಾಗಿ ಜಾರಿಯಾದ ಗೃಹಲಕ್ಷ್ಮೀಗೆ ಕೇವಲ ಒಂದೂವರೆ ತಿಂಗಳಲ್ಲಿ 1,935 ಕೋಟಿ ರೂ. ವೆಚ್ಚವಾಗಿರುವುದು ಗಮನಾರ್ಹ. ಐದು ಗ್ಯಾರಂಟಿಗಳಿಗೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ 39,815 ಕೋಟಿ ರೂ. ವೆಚ್ಚದ ಅಂದಾಜು